ಬ್ಯಾಂಕಾಕ್ನಲ್ಲಿ ಭಾರೀ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಪ್ರವಾಹದ ತೀವ್ರತೆಗೆ ರಸ್ತೆಗಳಲ್ಲಿ ನಿಲ್ಲಿಸಿದ್ದ ನೂರಾರು ಕಾರುಗಳು ಹಾಗೂ ವಾಹನಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಪ್ರವಾಹದ ನೀರು ನಗರದ ಬೀದಿಗಳಿಗೆ ನುಗ್ಗಿದ್ದರಿಂದ ರಸ್ತೆಗಳಲ್ಲಿ ಹಾವುಗಳು ಸೇರಿದಂತೆ ಅಪಾಯಕಾರಿ ಜಲಚರಗಳು ಮತ್ತು ವಿಷಜಂತುಗಳು ತೇಲಿಬರುತ್ತಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.