ಬನ್ನೇರುಘಟ್ಟ ಸಮೀಪದ ಆನೇಕಲ್ ತಾಲ್ಲೂಕಿನ ಬೇಗಿಹಳ್ಳಿ ಸಾಯಿ ಸಮೃದ್ಧಿ ಬಡಾವಣೆಯಲ್ಲಿ ಮುಂಜಾನೆ 4:10ಕ್ಕೆ ಒಂಟಿ ಸಲಗ ಓಡಾಡಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯದಲ್ಲಿ ಆನೆಯು ಕಾರೊಂದನ್ನು ದಂತದಿಂದ ಎಸೆದು ಹಾನಿಗೊಳಿಸಿದೆ. ಈ ಘಟನೆಯಿಂದ ಸ್ಥಳೀಯರು ಬೆಳೆ ಮತ್ತು ಜೀವ ಹಾನಿಯ ಆತಂಕದಲ್ಲಿದ್ದಾರೆ. ಮಾನವ-ಕಾಡಾನೆ ಸಂಘರ್ಷ ಹೆಚ್ಚುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ.