ದಕ್ಷಿಣ ಕನ್ನಡದ ಬಂಟ್ವಾಳ (ಬಿ.ಸಿ. ರೋಡ್) ರೈಲು ನಿಲ್ದಾಣವು 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ಆಧುನಿಕವಾಗಿ ರೂಪಾಂತರಗೊಂಡಿದೆ. ಒಂದು ಸಾಮಾನ್ಯ ನಿಲ್ದಾಣದಿಂದ ಮಿನಿ ಏರ್ಪೋರ್ಟ್ಗೆ ಸಮಾನವಾದ ಸೌಲಭ್ಯಗಳನ್ನು ಪಡೆದಿದೆ. ಈ ಮರುಅಭಿವೃದ್ಧಿಯು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಿದೆ. ವಿಶ್ವದರ್ಜೆಯ ಮೂಲಸೌಕರ್ಯಗಳೊಂದಿಗೆ ಈ ನಿಲ್ದಾಣವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾಗಿ ಹೊಸ ಚೈತನ್ಯ ಪಡೆದಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದಾರೆ.