ಮೈಸೂರಿನ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಅಕ್ರಮ ಬೇಟೆಗೆ ಹಾಕಿದ್ದ ಉರುಳಿಗೆ ಮಂಗೋಲಿಯಾದಿಂದ ವಲಸೆ ಬಂದಿದ್ದ ಪಟ್ಟೆ ತಲೆ ಬಾತು (Bar-headed Goose) ಸಿಲುಕಿ ಒದ್ದಾಡುತ್ತಿತ್ತು. ಸ್ಥಳೀಯರ ಸಮಯಪ್ರಜ್ಞೆಯಿಂದ ಪಕ್ಷಿಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಪಕ್ಷಿಯ ಕಾಲಿನಲ್ಲಿದ್ದ ಉರುಳನ್ನು ಬಿಡಿಸಿ, ಅದನ್ನು ಹದಿನಾರು ಕೆರೆಗೆ ಬಿಡುಗಡೆ ಮಾಡಲಾಯಿತು. ಈ ಮಾನವೀಯ ಕಾರ್ಯದಿಂದ ವಲಸೆ ಹಕ್ಕಿ ಮುಕ್ತವಾಗಿ ಕೆರೆಗೆ ಹಾರಿತು.