ಯತ್ನಾಳ್ ಅವರು ಪ್ರದೀಪ್ ಈಶ್ವರ್ ಕುರಿತು ಮಾತನಾಡಲು ನಿರಾಕರಿಸಿದರು. ಕರ್ನಾಟಕ ಸರ್ಕಾರವು ಪಾಕಿಸ್ತಾನ ಮಾದರಿಯಲ್ಲಿದ್ದು, ಅಲ್ಪಸಂಖ್ಯಾಕರ ಪರವಾಗಿದೆ ಎಂದು ಆರೋಪಿಸಿದರು. ದಲಿತರು ಮತ್ತು ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ ಎಂದರು. 2028ರ ವೇಳೆಗೆ ರಾಜ್ಯಕ್ಕೆ ಹಿಂದೂಪರ ಮುಖ್ಯಮಂತ್ರಿ ಬೇಕು ಎಂದು ಪ್ರತಿಪಾದಿಸಿ, ಮೇ ತಿಂಗಳಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಆಯೋಜಿಸುವುದಾಗಿ ಘೋಷಿಸಿದರು.