ಬೇರೆಯವರ ಖುಷಿಗೆ ನೀವು ಕಾರಣರಾಗಿ. ಆ ಖುಷಿಯ ಮುಂದೆ ಬೇರಾವ ಸಂತೋಷವೂ ಇರಲಾರದು. ಯುವಕನೊಬ್ಬ ಹೂವು ಮಾರುತ್ತಿದ್ದ ಅಂಗವಿಕಲ ಮಹಿಳೆಯ ಬಳಿ ಹೂವು ಖರೀದಿಸಿ ಆ ಹೂವನ್ನು ಆಕೆಗೇ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.