ಚಿಕ್ಕಮಗಳೂರು ಜಿಲ್ಲೆಯ ಕಾಫಿನಾಡಿನ ಕೆಮ್ಮಣ್ಣುಗುಂಡಿ ಸಮೀಪ ಕರಡಿ ಕಾಣಿಸಿಕೊಂಡು ಹೊಸ ಆತಂಕ ಸೃಷ್ಟಿಸಿದೆ. ಈಗಾಗಲೇ ಕಾಡಾನೆ ಹಾಗೂ ಚಿರತೆಗಳ ಹಾವಳಿಯಿಂದ ತತ್ತರಿಸಿರುವ ಪ್ರದೇಶದಲ್ಲಿ ಇದೀಗ ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಕರಡಿ ವಾಹನಕ್ಕೆ ಅಡ್ಡಲಾಗಿ ಬಂದಿದೆ. ತರೀಕೆರೆ ಅರಣ್ಯ ಇಲಾಖೆ ವ್ಯಾಪ್ತಿಯ ಈ ಘಟನೆ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.