ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಉಬ್ಬಳಗುಂಡಿ ಗ್ರಾಮದ ಜಮೀನುಗಳಲ್ಲಿ ಹಗಲು ವೇಳೆಯಲ್ಲೇ ಕರಡಿ ಪ್ರತ್ಯಕ್ಷವಾಗುತ್ತಿದ್ದು, ರೈತರು ಹಾಗೂ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ. ಜಮೀನು ಕೆಲಸಗಳಿಗೆ ತೆರಳಲು ಭಯಪಡುತ್ತಿರುವ ಸಾರ್ವಜನಿಕರು, ತಕ್ಷಣವೇ ಕರಡಿಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತೀವ್ರ ಒತ್ತಾಯ ಹೇರಿದ್ದಾರೆ.