ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅವಳಿಹಟ್ಟಿಯ ಗ್ರಾಮದ ತೋಟದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ರಾಜ್ಯ ಹೆದ್ದಾರಿ ರಸ್ತೆ ದಾಟಿ ಜಮೀನಿನಲ್ಲಿ ಕರಡಿ ಸಂಚರಿಸಿದ್ದು, ಹಗಲಲ್ಲೇ ಜಾಂಬವಂತನ ಓಡಾಟದಿಂದ ರೈತರು ಭಯಭೀತರಾಗಿದ್ದಾರೆ. ರೈತರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಜನರು ಕಿಡಿ ಕಾರಿದ್ದಾರೆ.