ಮದ್ಯದಲ್ಲಿರುವ ಆಲ್ಕೋಹಾಲ್ ಕಂಟೆಂಟ್ ಮೇಲೆ ತೆರಿಗೆ ವಿಧಿಸುವ ನೀತಿ ಜಾರಿಗೆ ಬಂದಿರುವುದೇ ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಸಚಿವ ಕೆಎಂ ಶಿವಲಿಂಗೇಗೌಡ ಹೇಳಿದರು. ಪರಿಷ್ಕೃತ ನೀತಿಯಿಂದಾಗಿ ಬಿಯರ್ ಬೆಲೆ ಕೂಡ 50 ರಿಂದ 60 ರೂಪಾಯಿ ಕಡಿಮೆಯಾಗಿದೆ. ಆದ್ದರಿಂದ ಅದನ್ನ ಅಪೇಕ್ಷಿಸುವ ಗ್ರಾಹಕರ ಸಂಖ್ಯೆ ಜಾಸ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.