ಪಶ್ಚಿಮಘಟ್ಟದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಳಗಾವಿಯ ಚಿಕ್ಕಲೆ ಫಾಲ್ಸ್ಗೆ ಜೀವಕಳೆ ಬಂದಿದೆ. ಒಂದು ವಾರದ ಹಿಂದೆ ನೀರಿಲ್ಲದೆ ಬರಡಾಗಿದ್ದ ಜಲಪಾತವೀಗ ಧುಮ್ಮಿಕ್ಕಿ ಹರಿಯುತ್ತಿದೆ. ಅದರ ರಮಣೀಯ ದೃಶ್ಯ ಕಣ್ಣಿಗೆ ಹಬ್ಬವಾಗಿದ್ದರೂ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಪ್ರವೇಶವನ್ನು ನಿಷೇಧಿಸಿದೆ.