ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೂಪ್ಚಂದ್ರಾಡ ಗ್ರಾಮದಲ್ಲಿ ಬಸ್ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿದಿನ ಪ್ರಾಣ ಪಣಕ್ಕಿಟ್ಟು ಕೆಎಸ್ಆರ್ಟಿಸಿ ಬಸ್ಗಳ ಫುಟ್ಬೋರ್ಡ್ ಮತ್ತು ಬಾಗಿಲಿನಲ್ಲಿ ಜೋತುಬಿದ್ದು ಶಾಲೆಗೆ ಹೋಗುತ್ತಿದ್ದಾರೆ. ವಿದ್ಯಾರ್ಥಿಗಳ ಈ ಅಪಾಯಕಾರಿ ಪ್ರಯಾಣದ ಕುರಿತು ಅಧಿಕಾರಿಗಳು ಮೌನ ವಹಿಸಿರುವುದು ಆತಂಕಕ್ಕೆ ಕಾರಣವಾಗಿದೆ.