ಬೆಳಗಾವಿ ಜಿಲ್ಲೆಯ ಪ್ರಸಿದ್ಧ ರಾಕಸಕೊಪ್ಪ ಜಲಾಶಯದ ಹಿನ್ನೀರಿನಲ್ಲಿ ಸಾರ್ವಜನಿಕರು ಹಾಗೂ ಪೋಷಕರು ಮಕ್ಕಳೊಂದಿಗೆ ಅಪಾಯಕಾರಿ ರೀತಿಯಲ್ಲಿ ನೀರಿಗೆ ಇಳಿದು ಹುಚ್ಚಾಟ ಮೆರೆಯುತ್ತಿದ್ದಾರೆ. ಜಲಾಶಯದ ಹಿನ್ನೀರಿನ ಆಳ ಮತ್ತು ತಗ್ಗು ಪ್ರದೇಶಗಳ ಅರಿವಿಲ್ಲದೆ, ಕೇವಲ ವಿನೋದಕ್ಕಾಗಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮತ್ತು ನೀರಾಟವಾಡಲು ಜನರು ಮುಂದಾಗುತ್ತಿರುವುದು ಭೀತಿ ಮೂಡಿಸಿದೆ. ಡ್ಯಾಂ ಮುಂಭಾಗದಲ್ಲಿ ಕಾವಲು ಸಿಬ್ಬಂದಿ ಇದ್ದರೂ, ಗ್ರಾಮೀಣ ಭಾಗದ ಹಿಂಬದಿಯ ಮಾರ್ಗವಾಗಿ ಬಂದು ಜನರು ಈ ರೀತಿ ನಿಯಮ ಮೀರಿ ವರ್ತಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.