ಬೆಳಗಾವಿಯಲ್ಲಿ ಚಂದ್ರ ಗ್ರಹಣದ ನಡುವೆಯೂ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕುಂದಾನಗರಿಯಲ್ಲಿ ಜನರು ಗಲ್ಲಿ ಗಲ್ಲಿಯಲ್ಲೂ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಯುವತಿಯರು ಸಹ ಡಿಜೆ ಸೌಂಡ್ಗೆ ಅದ್ಭುತವಾಗಿ ಹೆಜ್ಜೆ ಹಾಕಿದರು. ಈ ಹಬ್ಬವು ಎಲ್ಲೆಡೆ ಉತ್ಸಾಹ ಮತ್ತು ಸಂತೋಷವನ್ನು ತುಂಬಿತು.