ಕ್ಯಾಬ್ನಲ್ಲಿ ಮಲಗಿದ್ದ ಮಗುವನ್ನೇ ಪೋಷಕರು ಮರೆತು ಹೋದ ಘಟನೆ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ. 4 ವರ್ಷದ ಮಗು ಕ್ಯಾಬ್ನಲ್ಲಿ ಮಲಗಿರೋದು ಗಮನಿಸದೇ ಪೋಷಕರು ಕ್ಯಾಬ್ ನಿಂದ ಇಳಿದುಹೋಗಿದ್ರು. ಚಾಲಕನೂ ಗಮನಿಸಿರಲಿಲ್ಲ. ಬಳಿಕ ಮಗುವಿನ ಪೋಷಕರು ಹೊಯ್ಸಳ ಪೊಲೀಸರ ಮೊರೆ ಹೋದ್ರು. ಪೊಲೀಸರು ವಾಹನ ಪತ್ತೆ ಹಚ್ಚಿ ಚಾಲಕನ ಸಂಪರ್ಕಿಸಿದ್ರು. ಕಾರಿನ ಹಿಂದಿನ ಸೀಟ್ನಲ್ಲಿ ಮಗು ಮಲಗಿತ್ತು. ಪೋಷಕರು ಇಳಿದ ಜಾಗಕ್ಕೆ ಹೋಗಿ ಪೋಷಕರಿಗೆ ಮಗುವನ್ನು ಒಪ್ಪಿಸಿದ್ದಾರೆ.