ಬೆಂಗಳೂರು ನಗರದ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಜುನಾಥ ನಗರದ ಫ್ಲೈ ಓವರ್ ಕೆಳಗೆ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಇಟ್ಟಿಗೆ ವ್ಯಾಪಾರಕ್ಕೆ ಜಿಬಿಎ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಪಶ್ಚಿಮ ವಿಭಾಗದ ಜಿಬಿಎ ಅಧಿಕಾರಿಗಳು ಗುರುವಾರ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮ ಅಡ್ಡೆಯನ್ನು ತೆರವುಗೊಳಿಸಿದ್ದಾರೆ.