ಬೆಂಗಳೂರಿನ ಹೊಸಕೋಟೆಯಲ್ಲಿ ಬಿಎಂಟಿಸಿ ಬಸ್ ಮೇಲೆ ಅಂಟಿಸಲಾಗಿದ್ದ ತಂಬಾಕು ಉತ್ಪನ್ನದ ಜಾಹೀರಾತನ್ನು ಹರಿದುಹಾಕುವ ಮೂಲಕ ಯುವತಿಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಎಲ್ಲ ಸರ್ಕಾರಿ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ. ಆದರೂ ಈ ಬಸ್ ಮೇಲಿನ ಜಾಹೀರಾತು ಹಾಗೆಯೇ ಉಳಿದಿತ್ತು.