ಬೆಂಗಳೂರಿನ ಲಗ್ಗೆರೆಯ ಕೆಂಪೇಗೌಡ ಲೇಔಟ್ನಲ್ಲಿ ಮೂತ್ರ ವಿಸರ್ಜನೆ ವಿಚಾರಕ್ಕೆ ಕುಮಾರ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ರಸ್ತೆ ಬದಿ ಮೂತ್ರ ವಿಸರ್ಜನೆಗೆ ನಿಂತಿದ್ದ ಕುಮಾರ್ಗೆ ಅಪರಿಚಿತ ವ್ಯಕ್ತಿಯೊಬ್ಬರು "ನನ್ನ ನೋಡಿ ಮೂತ್ರ ಮಾಡುತ್ತೀಯಾ" ಎಂದು ಜಗಳ ತೆಗೆದು ಮುಖಕ್ಕೆ ಪಂಚ್ ನೀಡಿದ್ದಾರೆ. ಇದರಿಂದ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.