ಬೆಂಗಳೂರಿನ ಹೊಸ ವರ್ಷಾಚರಣೆಗೆ ಎಂಟರಿಂದ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಟ್ರಾಫಿಕ್ ಕಮಿಷನರ್ ಕಾರ್ತಿಕ್ ರೆಡ್ಡಿ ಅವರು ಸಂಚಾರ ವ್ಯವಸ್ಥೆ ಕುರಿತು ಮಾಹಿತಿ ನೀಡಿದ್ದಾರೆ. 2500 ಟ್ರಾಫಿಕ್ ಪೊಲೀಸರು, 400 ವಾರ್ಡನ್ಗಳು ನಿಯೋಜನೆಗೊಂಡಿದ್ದಾರೆ. 50 ಫ್ಲೈಓವರ್ಗಳು ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆವರೆಗೆ ಬಂದ್ ಆಗಲಿವೆ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಹಾಗೂ ಸಾರ್ವಜನಿಕ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.