ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದೆ. ಹೆಗಡೆ ನಗರದಲ್ಲಿ ಕ್ಯಾಬ್ ಚಾಲಕ ನರಸಿಂಹಯ್ಯ, ಬಿಎಂಟಿಸಿ ಬಸ್ ಚಾಲಕ ನಾಗೇಶ್ ಹಾಗೂ ಕಂಡಕ್ಟರ್ ಕೆಂಚಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಬಸ್ ತನ್ನ ವಾಹನಕ್ಕೆ ತಾಗಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಥಳಿಸಿದ್ದಾನೆ. ಪ್ರಯಾಣಿಕರು ಇದನ್ನು ಸೆರೆ ಹಿಡಿದಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.