ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಬಿಎಂಟಿಸಿ ಬಸ್ ಚಾಲಕ ಮತ್ತು ಬೈಕ್ ಸವಾರನ ನಡುವೆ ನಡೆದ ಭೀಕರ ರೋಡ್ ರೇಜ್ ದೃಶ್ಯವು ಮತ್ತೊಬ್ಬ ಸವಾರನ ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಚಾರ ದಟ್ಟಣೆಯ ವೇಳೆ ಸಣ್ಣ ಕಾರಣಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಬೆಂಗಳೂರು ಟ್ರಾಫಿಕ್ನಲ್ಲಿ ಸವಾರರ ಆಕ್ರೋಶ ಮತ್ತು ರಸ್ತೆ ಸುರಕ್ಷತೆಯ ಆತಂಕವನ್ನು ಈ ಘಟನೆ ಮತ್ತೊಮ್ಮೆ ಬಿಂಬಿಸಿದೆ. ಈ ಕುರಿತ ಸೌಹಾರ್ದಯುತ ಚಾಲನೆಯ ಮನವಿಯೊಂದಿಗೆ ಕರ್ನಾಟಕ ಪೋರ್ಟ್ಫೋಲಿಯೊ ಎಕ್ಸ್ನಲ್ಲಿ (X) ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.