ಬೆಂಗಳೂರಿನಲ್ಲಿ ಸ್ಕೂಟಿ ಮಾಲೀಕರೊಬ್ಬರು 102 ಬಾರಿ ಸಂಚಾರ ನಿಯಮ ಉಲ್ಲಂಘಿಸಿ 96 ಸಾವಿರ ರೂ. ದಂಡಕ್ಕೆ ಗುರಿಯಾಗಿದ್ದಾರೆ. ಫ್ರೇಜರ್ಟೌನ್ ಜಂಕ್ಷನ್ನಲ್ಲಿ ಒಂದೇ ಸಿಗ್ನಲ್ನಲ್ಲಿ 53 ಸಾವಿರ ರೂ. ದಂಡ ಬಿದ್ದಿದೆ. ಹೆಲ್ಮೆಟ್ ಧರಿಸದಿದ್ದಕ್ಕೆ 71 ಸಾವಿರ ರೂ. ದಂಡ ವಿಧಿಸಲಾಗಿದ್ದು, 30 ಸಾವಿರ ರೂ. ಮೌಲ್ಯದ ಸ್ಕೂಟಿಗೆ ಬರೋಬ್ಬರಿ 96 ಸಾವಿರ ರೂ. ದಂಡ ಕಟ್ಟುವ ಪರಿಸ್ಥಿತಿ ಬಂದಿದೆ.