ಬೆಂಗಳೂರಿನ ಕೆಂಗೇರಿ ಮೆಟ್ರೋ ಟರ್ಮಿನಲ್ ಬಳಿ ಮಧ್ಯರಾತ್ರಿ ಪುಂಡ ಯುವಕರ ಗುಂಪು ರಸ್ತೆ ತಡೆದು ವೀಲ್ಹಿಂಗ್ ನಡೆಸಿದೆ. ನಾಲ್ಕು ಬೈಕ್ಗಳಲ್ಲಿ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟುಮಾಡಿದ ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಹಿಂಬದಿ ವಾಹನಗಳಿಗೆ ದಾರಿ ಬಿಡದೆ ನಡೆಸಿದ ಈ ಹಾವಳಿಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಪೊಲೀಸರು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.