ಸಿಲಿಕಾನ್ ಸಿಟಿಯಲ್ಲಿ ವೀಲ್ಹಿಂಗ್ ಪುಂಡರ ಅಟ್ಟಹಾಸ ಮಿತಿಮೀರಿದೆ. ಖಾಲಿ ರಸ್ತೆಗಳಲ್ಲಷ್ಟೇ ಅಲ್ಲದೆ, ಇದೀಗ ರೋಗಿಯನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಅನ್ನು ಕೂಡ ಓವರ್ಟೇಕ್ ಮಾಡಿ ಅಪಾಯಕಾರಿ ಸಾಹಸ ಮಾಡುತ್ತಿದ್ದಾರೆ. ಚಿಕ್ಕಬಿದರಕಲ್ಲು ಮುಖ್ಯ ರಸ್ತೆಯಲ್ಲಿ ನಡೆದ ಈ ಘಟನೆ ಅಪಘಾತಕ್ಕೆ ಕಾರಣವಾಗಬಹುದಿತ್ತು. ಇಂತಹ ನಿರ್ಲಕ್ಷ್ಯದ ವೀಲ್ಹಿಂಗ್ ಸಾರ್ವಜನಿಕರ ಜೀವಕ್ಕೆ ಅಪಾಯಕಾರಿ. ಈ ಪುಂಡರ ವಿರುದ್ಧ ಕಠಿಣ ಕ್ರಮದ ಅವಶ್ಯಕತೆಯಿದೆ.