ಬೆಂಗಳೂರಿನಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಜೋರಾಗಿದ್ದು, ನಾಯಂಡಹಳ್ಳಿ ಅಂಡರ್ ಪಾಸ್ ಬಳಿ ವೀಲ್ಹಿಂಗ್ ಮಾಡುತ್ತಿದ್ದ ದೃಶ್ಯವನ್ನು ಬೈಕ್ ಸವಾರನೋರ್ವ ವಿಡಿಯೋ ಮಾಡಿದ್ದಾರೆ. ‘ಪೊಲೀಸ್ ಪೊಲೀಸ್’ ಎಂದ ತಕ್ಷಣ ಪುಂಡರು ಬೈಕ್ ಸ್ಲೋ ಮಾಡಿ ಪಕ್ಕಕ್ಕೆ ಹೋಗಿದ್ದಾರೆ. ಸದ್ಯ ಪುಂಡರ ವ್ಹೀಲಿಂಗ್ ವಿಡಿಯೋ ವೈರಲ್ ಆಗಿದೆ.