ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಬೆಂಜ್ ಕಾರೊಂದು ನಡುರಸ್ತೆಯಲ್ಲೇ ಏಕಾಏಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕಾರಿನ ಮಾಲೀಕ ಪಾರಾಗಿದ್ದಾರೆ. ಕೋರಮಂಗಲ ನಿವಾಸಿ ಡಾ.ನಾಗರಾಜು ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.