ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದು ಕೂಡ ಒಂದು ಸವಾಲು. ಅದರಲ್ಲಿಯೂ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿನವರಲ್ಲಿ ಕಡಿಮೆಯಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಅದನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಲು ರಾಗಿ ಬೀಟ್ರೂಟ್ ತಾಲಿಪಟ್ಟು ಸೇವನೆ ಮಾಡಬಹುದು. ಇದರಲ್ಲಿ ಕಬ್ಬಿಣಾಂಶ, ಫೈಬರ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿದ್ದು, ಬೆಳಗಿನ ಉಪಹಾರ ಅಥವಾ ಸಂಜೆಯ ಲಘು ಆಹಾರಕ್ಕೆ ಸೂಕ್ತವಾದ ಅತ್ಯಂತ ಆರೋಗ್ಯಕರ ಖಾದ್ಯವಾಗಿದೆ. ತುರಿದ ಬೀಟ್ರೂಟ್, ರಾಗಿ ಹಿಟ್ಟು, ಈರುಳ್ಳಿ ಮತ್ತು ಮಸಾಲೆಗಳನ್ನು ಬಳಸಿ ತಯಾರಿಸುವ ಇದನ್ನು ತುಪ್ಪದೊಂದಿಗೆ ಬೇಯಿಸಿದರೆ ರುಚಿಯಾಗಿರುತ್ತದೆ. ಈ ರೆಸಿಪಿಯನ್ನು eatwithaishwarya ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.