ಭೂತಾನ್ ಭಾರತಕ್ಕೆ ಧನ್ಯವಾದ ಪತ್ರ ಬರೆದಿದೆ. ಜಾಗತಿಕ ತೈಲ ಸಂಕಷ್ಟದ ನಡುವೆಯೂ ಭಾರತ ಭೂತಾನ್ಗೆ ತೈಲ ಹಾಗೂ ಎಲ್ಪಿಜಿಯನ್ನು ನಿರಂತರವಾಗಿ ಪೂರೈಸಿದೆ. ಈ ಕಷ್ಟದ ಸಮಯದಲ್ಲಿಯೂ ಭಾರತ ಭೂತಾನ್ಗೆ ಬೆನ್ನೆಲುಬಾಗಿ ನಿಂತು, ಯಾವುದೇ ಅಡೆತಡೆಗಳಿಲ್ಲದೆ ಪೂರೈಕೆ ಮಾಡಿರುವುದರಿಂದ ಭೂತಾನ್ ಕೃತಜ್ಞತೆ ಸಲ್ಲಿಸಿದೆ.