ಸ್ಯಾಂಡಲ್ವುಡ್ ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ನಂಟಿನ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಬಹಳ ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ, ನಟಿಗೆ ಉದ್ಯಮಿ ಅರವಿಂದ್ ರೆಡ್ಡಿ ಕೇವಲ ಕಾರು ಮಾತ್ರವಲ್ಲದೆ ಲಕ್ಷಾಂತರ ಮೌಲ್ಯದ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ಉದ್ಯಮಿ ಅರವಿಂದ್ ರೆಡ್ಡಿ ಅವರು ನಟಿಯೊಂದಿಗೆ ಲಿವಿನ್ ರಿಲೇಶನ್ಶಿಪ್ನಲ್ಲಿದ್ದಾಗ, ಅವರಿಗೆ 7 ಲಕ್ಷ ಮೌಲ್ಯದ ಟಿವಿ, 1 ಲಕ್ಷ ಮೌಲ್ಯದ ಹಾಸಿಗೆ, 10 ಲಕ್ಷ ಮೌಲ್ಯದ ಫರ್ನಿಚರ್, 33 ಸಾವಿರ ಮೌಲ್ಯದ ಡೈನಿಂಗ್ ಸೆಟ್, 1.30 ಲಕ್ಷ ಮೌಲ್ಯದ ಬೆಡ್, ಮತ್ತು 15 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ ಎನ್ನಲಾಗಿದೆ.