ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆ ಗುಂಡಿಗಳ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸವಾರರು ರಸ್ತೆಗೆ ಬಿದ್ದಿರುವ ಘಟನೆ ಚಂದಾಪುರದ ನೆರಳೂರು ಸಮೀಪ ನಡೆದಿದೆ. ಪಕ್ಕದಲ್ಲೇ ಚಲಿಸುತ್ತಿದ್ದ ಟ್ರಕ್ನ ಚಕ್ರದಿಂದ ಸವಾರರು ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದು, ಘಟನೆಯ ದೃಶ್ಯ ಬೈಕ್ ಹಿಂಬದಿ ಇದ್ದ ಕಾರೊಂದರ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾರಿ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಇಬ್ಬರ ಜೀವ ಉಳಿದಿದೆ.