ಪೊಲೀಸರ ಮುಂದೆಯೇ ಪುಂಡರು ಬೈಕ್ ವ್ಹೀಲಿಂಗ್ ನಡೆಸಿರುವ ಘಟನೆ ಮೈಸೂರಿನ ಬಂಬೂಬಜಾರ್ ಬಳಿ ನಡೆದಿದೆ. ಖಾಕಿ ಭಯವಿಲ್ಲದೆ ವ್ಹೀಲಿಂಗ್ ನಡೆಸಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದು ವೈರಲ್ ಆಗಿದೆ. ಪುಂಡರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದು, ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.