ಸಿಎಂ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಅವರ ಕುಶಲೋಪರಿ ವಿಚಾರಿಸಿದ್ದೇನೆ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ, ಅಭಿವೃದ್ಧಿ ಸಂಬಂಧಿತ ಚರ್ಚೆ ನಮ್ಮ ನಡುವೆ ಆಗಿಲ್ಲ ಎಂದಿದ್ದಾರೆ. ಅವರಿಗೆ ಧೈರ್ಯ ಹೇಳಿದ್ರಾ ಸರ್ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಅವರಿಗೆ ಏನು ದೈರ್ಯ ಹೇಳುವುದು. ಅವರೇ ನಮಗೆ ಧೈರ್ಯ ಹೇಳುವಂತಿದ್ದಾರೆ ಎಂದಿದ್ದಾರೆ.