ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ ಕಾಣಿಸಿಕೊಂಡಿದೆ. 20 ವರ್ಷಗಳ ಬಳಿಕ ಮೊದಲ ಬಾರಿ ಬ್ಲ್ಯಾಕ್ ಪ್ಯಾಂಥರ್ ಪ್ರತ್ಯಕ್ಷವಾಗಿದ್ದು, ಮಲೆನಾಡಿಗರು ಈ ಬ್ಲ್ಯಾಕ್ ಪ್ಯಾಂಥರ್ನ್ನು ಕಪ್ಪು ಚಿರತೆ ಎನ್ನುತ್ತಾರೆ. 500 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ಭದ್ರಾ ಅಭಯಾರಣ್ಯದಲ್ಲಿನ ಬ್ಲ್ಯಾಕ್ ಪ್ಯಾಂಥರ್ ಮತ್ತು ಮರಿ ಓಡಾಟ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.