ಆಸ್ಟ್ರೇಲಿಯಾದ ಸಿಡ್ನಿ ನಗರದ ಜನಪ್ರಿಯ ಬಾಂಡಿ ಬೀಚ್ನಲ್ಲಿ ಮೂವರು ಉಗ್ರರು ಅಟ್ಟಹಾಸ ಮೆರೆದು ಹಲವರನ್ನು ಬಲಿಪಡೆದಿದ್ದಾರೆ. ಈ ವೇಳೆ, ನಿರಾಯುಧರಾದ ವ್ಯಕ್ತಿಯೊಬ್ಬರು ಉಗ್ರನೊಬ್ಬನ ಮೇಲೆ ಎರಗಿ ರೈಫಲ್ ಕಿತ್ತುಕೊಂಡು ಓಡಿಸಿ ಸಾಹಸ ಮೆರೆದಿದ್ದಾರೆ. ಈ ಘಟನೆಯ ದೃಶ್ಯ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.