ಸಾಮಾನ್ಯವಾಗಿ ಬದನೆಕಾಯಿಯನ್ನು ಯಾರೂ ಕೂಡ ಅಷ್ಟಾಗಿ ಇಷ್ಟಪಟ್ಟು ತಿನ್ನುವುದಿಲ್ಲ. ಸಾಂಬಾರ್, ಪಲ್ಯ ಹೀಗೆ ಯಾವುದಕ್ಕೆ ಹಾಕಿದರೂ ಕೂಡ ಅದನ್ನು ಬದಿಗಿಟ್ಟು ತಿನ್ನುತ್ತಾರೆ. ನಿಮ್ಮ ಮನೆಯಲ್ಲಿಯೂ ಹೀಗೆ ಆಗುತ್ತಾ? ಹಾಗಿದ್ರೆ ನೀವೊಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಲೇಬೇಕು. ಹೌದು, indian_cooked_7 ಎಂಬ ಇನ್ಸ್ಟಾ ಖಾತೆಯಲ್ಲಿ ಸುಲಭವಾಗಿ ಬದನೆಕಾಯಿ ತವಾ ಫ್ರೈ ಮಾಡುವ ರೆಸಿಪಿ ಶೇರ್ ಮಾಡಲಾಗಿದೆ. ಇದು ಮಾಡುವುದಕ್ಕೂ ಬಹಳ ಸುಲಭ ಅಷ್ಟೇ ಅಲ್ಲ, ಬದನೆಕಾಯಿ ಇಷ್ಟ ಇಲ್ಲ ಎನ್ನುವವರು ಕೂಡ ಚಪ್ಪರಿಸಿ ಇದನ್ನು ತಿನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ ನೋಡಿ.