ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅಖಾಡದಲ್ಲಿ ಓಡುವಾಗ ಕಾಲು ಜಾರಿ ಬಿದ್ದು ಹೋರಿಯ ಕಾಲು ಮುರಿತವಾಗಿದೆ. ಬಿದ್ದು ಕಾಲುಮುರಿದರೂ ಎದ್ದು ಓಡಿ ಅಖಾಡವನ್ನು ದಾಟಿದ ಕೊಬ್ಬರಿ ಹೋರಿ ಸ್ಥಳದಲ್ಲಿದ್ದವರಲ್ಲಿ ಅಚ್ಚರಿ ಮೂಡಿಸಿದೆ. ಸದ್ಯ, ಕಾಲು ಮುರಿದರೂ ಓಡಿದ ಕೊಬ್ಬರಿ ಹೋರಿಯ ವಿಡಿಯೋ ವೈರಲ್ ಆಗಿದೆ.