ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನ ಸಂಗಬಸವನದೊಡ್ಡಿ ಬಳಿ ಕಳೆದ ಡಿಸೆಂಬರ್ 29ರಂದು ನಡೆದ ಭೀಕರ ಅಪಘಾತದ ದೃಶ್ಯ ವೈರಲ್ ಆಗಿದೆ. ಓವರ್ಟೇಕ್ ಮಾಡಲು ಯತ್ನಿಸಿದ ಕಾರಿಗೆ ಹಿಂದಿಯಿಂದ ಬರುತ್ತಿದ್ದ ಬಸ್ ಗುದ್ದಿದ್ದು, ಡಿಕ್ಕಿ ರಭಸಕ್ಕೆ ಕಾರು ಪಲ್ಟಿಯಾಗಿದೆ. ಚಾಲಕ ಸೇರಿ ಮತ್ತೊಬ್ಬರು ಕಾರಲ್ಲಿ ಇದ್ದರು ಎನ್ನಲಾಗಿದ್ದು, ಸೀಟ್ಬೆಲ್ಟ್ ಧರಿಸಿದ್ದರಿಂದ ಇಬ್ಬರ ಜೀವವೂ ಉಳಿದಿದೆ.