ಮದ್ಯ ಸೇವಿಸಿ ಅಮಲಿನಲ್ಲಿ ಚಾಲಕ ಕ್ಯಾಂಟರ್ ಚಲಾಯಿಸಿದ ಪರಿಣಾಮ ನಡು ರಸ್ತೆಯಲ್ಲೇ ಅದು ಪಲ್ಟಿಯಾದ ಘಟನೆ ಉಡುಪಿ ತಾಲೂಕಿನ ಹಿರಿಯಡ್ಕದ ಗುಡ್ಡೆಯಂಗಡಿ ಬಳಿ ನಡೆದಿದೆ. ಹಿರಿಯಡ್ಕದಿಂದ ಕಾರ್ಕಳ ಕಡೆಗೆ ಅತೀ ವೇಗವಾಗಿ ಸಂಚರಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಅಪಘಾತದ ದೃಶ್ಯ ಹಿಂಬದಿ ಇದ್ದ ಕಾರಿನಲ್ಲಿನ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದೆ.