ವಾಹನದ ವೆಲ್ಡಿಂಗ್ ಮಾಡುವ ವೇಳೆ ರಸ್ತೆಯಲ್ಲೇ ಕ್ಯಾಂಟರ್ ವಾಹನ ಹೊತ್ತಿ ಉರಿದಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕೆಂಪಾಪುರ ಗ್ರಾಮದ ಬಳಿ ನಡೆದಿದೆ. ರಾಜಸ್ಥಾನದ ನೊಂದಣಿ ಹೊಂದಿರುವ ಕ್ಯಾಂಟರ್ ಅಗ್ನಿಗೆ ಆಹುತಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.