ರೋಮೇನಿಯಾದ ಪರ್ವತ ಪ್ರದೇಶದ ಪ್ರವಾಸಿ ನಗರವಾದ ಬುಸ್ಟೆನಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಹಲವು ಕಾರುಗಳು ಕೊಚ್ಚಿಹೋಗಿವೆ. ಬುಸೆಗಿ ಪರ್ವತ ಶ್ರೇಣಿಯ ಜೇಪಿ ಕಣಿವೆಯಲ್ಲಿ ದಿಢೀರನೆ ಸಂಭವಿಸಿದ ಮೇಘಸ್ಫೋಟ ಮತ್ತು ಅತಿಯಾದ ಮಳೆಯಿಂದಾಗಿ ಜೆಪಿ ನದಿಯ ನೀರಿನ ಮಟ್ಟ ತೀವ್ರವಾಗಿ ಹೆಚ್ಚಾಯಿತು. ಬೆಟ್ಟದ ಇಳಿಜಾರುಗಳಿಂದ ಭಾರಿ ಪ್ರಮಾಣದ ನೀರು, ಮಣ್ಣು, ಕಲ್ಲುಗಳು ಮತ್ತು ದೈತ್ಯ ಮರದ ದಿಮ್ಮಿಗಳು ಒಟ್ಟಿಗೆ ನುಗ್ಗಿ ಬಂದಿದ್ದರಿಂದ ಇಡೀ ನಗರವೇ ಜಲಾವೃತಗೊಂಡಿತು. ರಸ್ತೆಗಳು ನದಿಗಳಂತಾಗಿದ್ದು, ಭೀಕರ ನೀರಿನ ಹರಿವಿಗೆ ಸುಮಾರು 30ಕ್ಕೂ ಹೆಚ್ಚು ಕಾರುಗಳು ಮತ್ತು ವಾಹನಗಳು ಆಟಿಕೆಗಳಂತೆ ಕೊಚ್ಚಿಹೋಗಿವೆ.