ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಬರುವ ಸರಗಳ್ಳರು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿರುವ ಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಂದಗುಡಿ, ಸೂಲಿಬೆಲೆ, ವಿಜಯಪುರದಲ್ಲಿ ನಡೆದಿವೆ. ನೆಲಮಂಗಲದಲ್ಲಿ ಕಳ್ಳತನ ಮಾಡಿದ್ದ ಬೈಕ್ನಲ್ಲಿ ಬರುವ ಆರೋಪಿಗಳು ಮಾಲೂರು, ದೇವನಹಳ್ಳಿಯಲ್ಲಿಯೂ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. 3 ಕಡೆ ಸರಗಳ್ಳತನ ಸಂಬಂಧ 3 ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಸರಗಳ್ಳರ ಬಂಧನಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರಿಂದ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ.