ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಸಾಲೆದೋಸೆ, ಬೆಣ್ಣೆ ದೋಸೆ ಬಗ್ಗೆ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಗಮನಿಸಿದ್ದೇನೆ . ಯಾವಾಗ ನಿಮಗೆ ಬಾಯಲ್ಲಿ ನೀರೂರಿತ್ತು ಅಂತಾ ಜನರಿಗೆ ಸ್ವಲ್ಪ ಹೇಳಿ ಸತೀಶ್ ಜಾರಕಿಹೊಳಿಯವರೇ. ನಿಮ್ಮ ಸಹೋದರ ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು ಅಂತಾ ನಿಮಗೆ ಗೊತ್ತಿಲ್ವಾ? ಗೊತ್ತಿದ್ದೂ ನೀವು ಯಾವತ್ತಾದರೂ ಅದರ ಬಗ್ಗೆ ಮಾತಾಡಿದ್ದೀರಾ? ನಿಮ್ಮ ಸಹೋದರನ ನೆರವಿಗೆ ನೀವು ಬಂದಿದ್ದೀರಾ? ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.