ಚಾಮರಾಜನಗರದಲ್ಲಿ ತೀವ್ರ ಬಿಸಿಲಾಘಾತದಿಂದ ವನ್ಯಮೃಗಗಳು ತತ್ತರಿಸಿವೆ. 36-37 ಡಿಗ್ರಿ ಸೆಲ್ಸಿಯಸ್ ತಾಪಮಾನದ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಪಿಜಿ ಪಾಳ್ಯದ ಕೆರೆಯಲ್ಲಿ 10ಕ್ಕೂ ಹೆಚ್ಚು ಕಾಡಾನೆಗಳು, ತಮ್ಮ ಮರಿಗಳೊಂದಿಗೆ ಗಂಟೆಗಟ್ಟಲೆ ನೀರಿಗಿಳಿದು ವಿಶ್ರಾಂತಿ ಪಡೆದವು. ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಗಜಪಡೆ ಕೆರೆಗಳತ್ತ ಹೆಜ್ಜೆ ಹಾಕುವುದು ಹವಾಮಾನ ಬದಲಾವಣೆಯ ತೀವ್ರತೆಯನ್ನು ತೋರಿಸುತ್ತದೆ.