ಚಾಮರಾಜನಗರದಲ್ಲಿ ಅಬಜುರ್ ಮತ್ತು ಹನೀಫ್ ಎಂಬ ಬೈಕ್ ಸವಾರರು ಚಿರತೆ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಒಡೆಯರಪಾಳ್ಯದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದಾಗ ಅಂಡಿಪಾಳ್ಯದ ತಿರುವಿನಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದೆ. ಹಿಂಬದಿಯಿಂದ ಬಂದ ಕಾರು ಚಾಲಕ ಹಾರನ್ ಒತ್ತಿದ್ದರಿಂದ ಚಿರತೆ ಗಾಬರಿಗೊಂಡು ಓಡಿಹೋಗಿದ್ದು, ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.