ಚಾಮರಾಜನಗರ ಜಿಲ್ಲೆಯ ಮೂಡಗೂರು ಗ್ರಾಮದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇಂದು ಬೆಳಿಗ್ಗೆ ಹುಲಿಯೊಂದು ಹಸುಗಳ ಮೇಲೆ ದಾಳಿ ನಡೆಸಿದರೆ, ತಡರಾತ್ರಿ ಮೊಂಡು ಬಾಲದ ಚಿರತೆ ಪ್ರತ್ಯಕ್ಷವಾಗಿ ಭಯ ಮೂಡಿಸಿದೆ. ಆಗಾಗ ಕಾಣಿಸಿಕೊಳ್ಳುತ್ತಿರುವ ಚಿರತೆ ಓಡಾಟದ ವಿಡಿಯೋ ವೈರಲ್ ಆಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹುಲಿ ಹಾಗೂ ಚಿರತೆಗಳನ್ನು ಸೆರೆ ಹಿಡಿಯಲು ಕೂಂಬಿಂಗ್ ನಡೆಸುವಂತೆ ಒತ್ತಾಯಿಸಿದ್ದಾರೆ.