ಚಾಮರಾಜನಗರದ ಕಲ್ಪುರ ಗ್ರಾಮದ ಸುತ್ತಮುತ್ತ ಹುಲಿ ಸೆರೆ ಕಾರ್ಯಾಚರಣೆ ತೀವ್ರಗೊಂಡಿದೆ. ಅರಣ್ಯಾಧಿಕಾರಿಗಳು ವಾಕ್ ಥ್ರೂ ಬೋನ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ದುಬಾರೆಯಿಂದ ತಂದ ಶ್ರೀರಾಮ ಮತ್ತು ಇಂದ್ರ ಎಂಬ ಸಾಕಾನೆಗಳೊಂದಿಗೆ ಕೂಂಬಿಂಗ್ ಪ್ರಾರಂಭಿಸಿದ್ದಾರೆ. ಹುಲಿಯ ಹಾವಳಿಯಿಂದ ರೈತರಲ್ಲಿ ಆತಂಕ ಹೆಚ್ಚಿದ್ದು, ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ.