ಚಾಮರಾಜನಗರದ ನಂಜೆದೇವನಪುರ ಗ್ರಾಮದಲ್ಲಿ ಹುಲಿ ಉಪಟಳ ಮುಂದುವರಿದಿದೆ. ರೈತರ ಕ್ಯಾಮರಾದಲ್ಲಿ ಹುಲಿ ಮತ್ತೆ ಸೆರೆಯಾಗಿದ್ದು, ಈ ಹಿಂದೆ ಐದು ಹುಲಿಗಳು ಪತ್ತೆಯಾಗಿದ್ದ ಇದೇ ಜಾಗದಲ್ಲಿ ಮತ್ತೊಮ್ಮೆ ಹುಲಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.