ಚಾಮರಾಜನಗರದ ಹೌಸಿಂಗ್ ಬೋರ್ಡ್ನಲ್ಲಿ ವಿಕೃತಕಾಮಿಯೊಬ್ಬ ಮನೆ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದ ಘಟನೆ ನಡೆದಿದೆ. ರಾತ್ರಿ ಮಹಿಳೆಯರ ವೇಷದಲ್ಲಿ ಬಂದು ಒಳ ಉಡುಪುಗಳನ್ನು ಕದ್ದು ಪರಾರಿಯಾಗುತ್ತಿದ್ದ ಆಸಾಮಿ, ನಂತರ ಅದನ್ನೇ ಧರಿಸಿ ಕಳವು ಮಾಡಲು ಬರುತ್ತಿದ್ದ. ಸದ್ಯ ಆತನ ಚಲನವಲನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.