ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪ್ರಸಿದ್ಧ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ. ಗುಡಿ ಬಳಿ ಇಂದು (ಜೂನ್ 9) ಬೆಳಗ್ಗೆ ಭಕ್ತರು ಹಾಗೂ ಪ್ರವಾಸಿಗರಿಗೆ ರೋಮಾಂಚನಕಾರಿ ಮತ್ತು ಅಷ್ಟೇ ಆತಂಕಕಾರಿ ಅನುಭವವಾಗಿದೆ. ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯೆ ನಡುರಸ್ತೆಯಲ್ಲೇ ಬೃಹತ್ ಹುಲಿಯೊಂದು ಆರಾಮವಾಗಿ ಸಂಚರಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ವಾಹನ ಸವಾರರು ಹುಲಿಯ ಓಡಾಟವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಹುಲಿಯು ಒಮ್ಮೆ ವಾಹನ ಸವಾರರನ್ನು ದಿಟ್ಟಿಸಿ ನೋಡಿ ನಂತರ ನಿಧಾನವಾಗಿ ಕಾಡಿನೊಳಗೆ ಹೆಜ್ಜೆ ಹಾಕಿದೆ.