ಚಾಮರಾಜನಗರದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಆಲಿಕಲ್ಲು ಮಳೆಯಾಗಿದೆ. ಕಾದ ಕಾವಲಿಯಂತಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಬಿಡುವು ನೀಡಿದೆ. ಮಳೆಯಲ್ಲೇ ಬೈಕ್ ಓಡಿಸಿ ಕೆಲವರು ಸಂಭ್ರಮಿಸಿದರೆ, ಇನ್ನು ಕೆಲವರು ಅಂಗಡಿಗಳ ಮುಂದೆ ಆಶ್ರಯ ಪಡೆದರು. ಈ ಅನಿರೀಕ್ಷಿತ ಮಳೆ ಚಾಮರಾಜನಗರ ಜಿಲ್ಲೆಗೆ ನವಚೈತನ್ಯ ನೀಡಿದೆ.